nata

ttm

adweb

udgharsha

 

ವಿಜಯ್‌ ಪ್ರಸಾದ್‌ ಮತ್ತು ಜಗ್ಗೇಶ್‌ ಕಾಂಬಿನೇಶನ್‌ನ "ತೋತಾಪುರಿ"- 'ತೊಟ್‌ ಕೀಳ್ಬೇಡಿ' ಸಿನಿಮಾದಲ್ಲಿ ಡಾಲಿ ಧನಂಜಯ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವ ವಿಚಾರ, ಈಗ ಆ ಸಿನಿಮಾದಲ್ಲಿ ಅವರ ಲುಕ್‌ ರೀವಿಲ್‌ ಆಗಿದ್ದು, ಡಾಲಿ ಸಖತ್‌ ಸ್ಟೈಲಿಷ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಾರಾಯಣ ಪಿಳ್ಳೈ ಎಂಬ ವ್ಯಾಪಾರಿಯ ರೋಲ್‌ ಇದಾಗಿದ್ದು, ಧನಂಜಯ,ಸುಮನ್‌ ರಂಗನಾಥ್‌ ಜೋಡಿಯಾಗಿ ನಟಿಸುತ್ತಿದ್ದಾರೆ.

 

ವಿಜಯ್‌ ಪ್ರಸಾದ್‌ ಅವರ ಕಾನ್ಸೆಪ್ಟ್‌ ಬಹಳ ಚೆನ್ನಾಗಿರುವ ಕಾರಣ ಅತಿಥಿ ಪಾತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರಂತೆ.

ಶ್ರುತಿ ಹರಿಹರನ್‌ ನಟನೆಯ ನಾತಿಚರಾಮಿ ಸಿನಿಮಾದಲ್ಲಿ ಹೆಣ್ಣಿನ ತುಮುಲಗಳನ್ನು ಹೇಳಿದ್ದಾರೆ ನಿರ್ದೇಶಕ ಮಂಸೂರೆ. ಈ ಹಿಂದೆ ಹರಿವು ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದ, ಇವರು ಈ ಬಾರಿ ಸ್ವಲ್ಪ ಕಮರ್ಷಿಯಲ್‌ ಅಂಶಗಳನ್ನು ಸಿನಿಮಾದಲ್ಲಿ ಸೇರಿಸಿದ್ದಾರಂತೆ.

.
ಶ್ರುತಿ ಹರಿಹರನ್‌ ಜತೆ ಸಂಚಾರಿ ವಿಜಯ್‌, ಪೂರ್ಣಚಂದ್ರ ಮೈಸೂರು, ಶರಣ್ಯ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಗನ್ಮೋಹನ್‌ ರೆಡ್ಡಿ ಹಾಗೂ ಶಿವಕುಮಾರ್‌ ರೆಡ್ಡಿ ಅವರು ನಿರ್ಮಾಣ ಮಾಡುತ್ತಿದ್ದಾರೆ.
.
ಈ ಸಿನಿಮಾದಲ್ಲಿ ಬಿಗಿ ನಿರೂಪಣೆಯಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಎಲ್ಲರ ಗಮನಸೆಳೆದಿದೆ. ಜತೆಗೆ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಲೇಖಕಿ ಸಂಧ್ಯರಾಣಿ ಸಂಭಾಷಣೆ ಬರೆಯುತ್ತಿದ್ದಾರೆ.

ಚಿತ್ರ ಇದೇ ಡಿಸೆಂಬರ್ 28 ರಂದು ತೆರೆಕಾಣುತ್ತಿದೆ.

 
ಸಲಿಂಗ ಕಾಮದ ಸಬ್ಜೆಕ್ಟ್ ಇಟ್ಟುಕೊಂಡು ಸಿನಿಮಾ ಮಾಡುವುದು ಬಹಳ ಕಡಿಮೆ, ಆದರೆ ಕನ್ನಡದಲ್ಲಿ ಅಂತಹದ್ದೊಂದು ವಿಶೇಷ ಸಬ್ಜೆಕ್ಟ್ ಸಿನಿಮಾವಾಗಿದ್ದು ಅದು ಹೊಸ ವರ್ಷದ ಆರಂಭದಲ್ಲಿ  ವಾರ ಬಿಡುಗಡೆಯಾಗುತ್ತಿದೆ. 
.
ಹೌದು ಟೇಶಿ ವೆಂಕಟೇಶ್‌ ನಿರ್ದೇಶನದ ಬೆಸ್ಟ್‌ ಫ್ರೆಂಡ್ಸ್‌ ಎಂಬ ಸಿನಿಮಾದಲ್ಲಿ  ಹೆಣ್ಣು ಹೆಣ್ಣನ್ನೇ ಪ್ರೀತಿಸುವ ಕತೆ. ಒಂದು ಕಡೆ ಇದಕ್ಕೆ ಕಾನೂನಿನ ಮಾನ್ಯತೆ ಬೇಕು ಎನ್ನುವ ಕೂಗು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದೇಶಕ ಟೇಶಿ ವೆಂಕಟೇಶ್‌ ಅವರು ಒಂದು ನೈಜ ಘಟನೆಯನ್ನು ಮುಂದಿಟ್ಟುಕೊಂಡು ಬೆಸ್ಟ್‌ ಫ್ರೆಂಡ್ಸ್‌ Ü ಸಿನಿಮಾ ಮಾಡಿದ್ದಾರೆ. 
.
ಈ ಚಿತ್ರದಲ್ಲಿ ಮೇಘನಾ, ಚಿಕ್ಕಮಗಳೂರಿನ ದ್ರಾವ್ಯ ಶೆಟ್ಟಿ, ಆಶಾ, ಸುಮತಿ ಪಾಟೀಲ್‌ ನಟಿಸಿದ್ದಾರೆ. ಲಯನ್‌ ಎಸ್‌ ವೆಂಕಟೇಶ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಇದೇ ಜನವರಿ 4ರಂದು ಚಿತ್ರ ಬಿಡುಗಡೆಯಾಗುತ್ತದೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ನಟಿಸುವ ಆಸೆಯ ಬಗ್ಗೆ ಬಹಳ ದಿನಗಳ ಹಿಂದೆಯೇ ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದರು.. ಆ ಕಾಲ ಈಗ ಕೂಡಿ ಬಂದಿದೆ. ಹೌದು, ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಅಡ್ವೆಂಚರ್ ಸಿನಿಮಾ ಒಂದರಲ್ಲಿ ಕಿಚ್ಚ ಸುದೀಪ ನಾಯಕರಾಗಿ ನಟಿಸಲಿದ್ದಾರೆ.

.

ಈ ಚಿತ್ರವು ಕಿಚ್ಚ ಸುದೀಪ ಅವರ “ಸುಪ್ರಿಯಾನ್ವಿ” ಬ್ಯಾನರ್ನಲ್ಲಿ ತಯಾರಾಗಲಿದ್ದು ಅವರೊಂದಿದೆ ಜಾಕ್ ಮಂಜುನಾಥ್ ಅವರ “ಕೆ ಎಸ್ ಕೆ ಶೋ ರೀಲ್” ಸಂಸ್ಥೆಯು ನಿರ್ಮಾಣದಲ್ಲಿ ಕೈಜೋಡಿಸಲಿದ್ದಾರೆ. ಈ ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ಬಹುಭಾಷಾ ಚಿತ್ರವಾಗಲಿದೆಯಂತೆ.

.

“ಅನೂಪ್ ಭಂಡಾರಿ ಅವರು ಹೇಳಿದ ಒನ್ ಲೈನ್ ಸ್ಟೋರಿ ತುಂಬಾ ಹಿಡಿಸಿತು. ಬಹಳ ಎಕ್ಸಿಟಿಂಗ್ ಅನ್ನಿಸ್ತು, ಅದರಿಂದ ನಾನೇ ನಿರ್ಮಿಸೋಣ ಅಂತ ತೀರ್ಮಾನಿಸಿದೆ. ನಮ್ಮ ಬ್ಯಾನರ್ “ಸುಪ್ರಿಯಾನ್ವಿ” ಜೊತೆ ಜಾಕ್ ಮಂಜು ಅವರ “ಕೆ ಎಸ್ ಕೆ ಷೋ ರೀಲ್” ಕೂಡ ನಿರ್ಮಾಣದಲ್ಲಿ ಜೊತೆಯಾಗಲಿದ್ದು, ಬಹು ಕೋಟಿವೆಚ್ಚದಲ್ಲಿ ತಯಾರಾಗಲಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ತಯಾರಾಗಲಿದೆ. ಸದ್ಯಕ್ಕೆ ಹೆಚ್ಚೇನೂ ಹೇಳಲಾರೆ, ಗುರುವಾರ ಸಂಜೆ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇವೆ” ಎಂದಷ್ಟೇ ಹೇಳಿ ಚಿತ್ರದ ಬಗೆಗಿನ ತಮ್ಮ ಉತ್ಸಾಹ ಹಂಚಿಕೊಂಡರು ಕಿಚ್ಚ ಸುದೀಪ್.

.

ಈ ಚಿತ್ರವು ಅವರು ಸದ್ಯ ಒಪ್ಪಿಕೊಂಡಿರುವ ಕನ್ನಡದ “ಪೈಲ್ವಾನ್” “ಕೋಟಿಗೊಬ್ಬ 3”, ತೆಲುಗಿನ “ಸೈರಾ” ಮತ್ತು ಹಾಲಿವುಡ್ ಚಿತ್ರ ರೈಸನ್ ಚಿತ್ರೀಕರಣ ಮುಗಿಸಿದ ನಂತರ ಬಹುಷಃ ಮೇ ತಿಂಗಳಲ್ಲಿ ಶುರುವಾಗಬಹುದು.

.

ಕಿಚ್ಚ ಸುದೀಪ್ ಅವರು ನಟಿಸುತ್ತಿರುವ “ಪೈಲ್ವಾನ್” ಚಿತ್ರದ ಶೇಕಡಾ 75ರಷ್ಟು ಶೂಟಿಂಗ್ ಮುಗಿದಿದ್ದು,ಜನವರಿಯಲ್ಲಿ ಬಹುತೇಕ ಚಿತ್ರೀಕರಣ ಮುಗಿಯಲಿದ್ದು.. ಸಂಕ್ರಾಂತಿ ನಂತರ ಸುದೀಪ್ ಅವರು ‘ಕೋಟಿಗೊಬ್ಬ 3’ ತಂಡ ಸೇರಿಕೊಳ್ಳಲಿದ್ದಾರೆ.

.

ಸದ್ಯಕ್ಕೆ ಈ ಅಡ್ವೆಂಚರ್ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಅನೂಪ್ ಭಂಡಾರಿ ಮತ್ತು ತಂಡ.

ಅಭಿನಯ ಚಕ್ರವರ್ತಿ ಸುದೀಪ್‌ ನಟನೆಯ 'ಕೋಟಿಗೋಬ್ಬ-3' ಸಿನಿಮಾದ ಕ್ಲೈಮ್ಯಾಕ್ಸ್‌ನ್ನು ಚಿತ್ರತಂಡ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ ಮಾಡಲು ನಿರ್ಧರಿಸಿದೆ.

.
ಸಿನಿಮಾದ ಮೊದಲ ಹಂತದ ಚಿತ್ರೀಕರಣ ಸರ್ಬಿಯಾ, ಬೆಂಗಳೂರಿನಲ್ಲಿ ನಡೆದಿದೆ. ಸರ್ಬಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್‌ ಮಾಡಿದ ಹೆಗ್ಗಳಿಕೆ ಈ ಚಿತ್ರಕ್ಕಿದೆ.
.
ಕ್ಲೈಮ್ಯಾಕ್ಸ್‌ ಮಾತ್ರ 2019ರ ಸಂಕ್ರಾಂತಿ ಹಬ್ಬದ ನಂತರ  ಬ್ಯಾಂಕಾಕ್‌ನಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಲಿದ್ದಾರಂತೆ. ಯುವ ಪ್ರತಿಭೆ ಶಿವಕಾರ್ತಿಕ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸೂರಪ್ಪ ಬಾಬು ಬಂಡವಾಳ ಹೂಡುತ್ತಿದ್ದಾರೆ. ಸುದೀಪ್‌ ಈಗ ಪೈಲ್ವಾನ್‌, ತೆಲುಗಿನ ಸೈರಾ ನರಸಿಂಹ ರೆಡ್ಡಿ ಮತ್ತು ಕಿರುತೆರೆಯ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ.
.
ಇನ್ನು ಕೋಟಿಗೊಬ್ಬ-3 ಚಿತ್ರದ ಫಸ್ಟ್‌ ಲುಕ್‌ ಮತ್ತು ಟೀಸರ್‌ ನೋಡಿದ ಬಾಂಬೆ ಮೂಲದ ಕಂಪನಿಯೊಂದು ಹಿಂದಿ ಡಬ್ಬಿಂಗ್‌ ರೈಟ್ಸ್‌ನ್ನು 9 ಕೋಟಿಗೆ ಕೊಂಡುಕೊಳ್ಳಲು ಮುಂದಾಗಿದೆಯಂತೆ. ಇನ್ನು ಎಲ್ಲ ಭಾಷೆಯ ಸ್ಯಾಟಲೈಟ್ಸ್‌ ರೈಟ್ಸ್‌ ಕೂಡಾ ಭಾರಿ ಮೊತ್ತದ ಆಫರ್‌ ಬಂದಿದೆಯಂತೆ. ಆದರೆ ಚಿತ್ರೀಕರಣ ಮುಗಿಯುವವರೆಗೂ ಮಾರಾಟ ಮಾಡದಿರುವ ನಿರ್ಮಾಪಕ ಸೂರಪ್ಪ ಬಾಬು ನಿರ್ಧರಿಸಿದ್ದಾರೆ.

 

ಕನ್ನಡ ಸಿನಿರಸಿಕರಿಗೊಂದು ಸಂತಸದ ಸುದ್ದಿ. ಸಿರಿಕನ್ನಡ - ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಕಂಪನ್ನು ಬೀರಲಿದೆ.
.
ಸಿರಿಕನ್ನಡ ವಾಹಿನಿಯ ಮುಖ್ಯಸ್ಥರು ಹೇಳುವಂತೆ 84ರ ವಸಂತದಲ್ಲಿರುವ ಕನ್ನಡ ಸಿನಿಮಾರಂಗಕ್ಕೆ ಸಿರಿಕನ್ನಡ ವಾಹಿನಿಯು ಹೆಮ್ಮೆಯ ಕೊಡುಗೆಯಾಗಿದ್ದು ಈ ವಾಹಿನಿಯ ಪರಿಕಲ್ಪನೆಯೇ ವಿಭಿನ್ನ. ಸಿನಿಮಾ ವಾಹಿನಿಗಳೆಂದರೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರುತ್ತವೆ ಆದರೆ ಸಿರಿಕನ್ನಡ ಇದಕ್ಕೂ ಮೀರಿದ ಮನರಂಜನೆಯನ್ನುತನ್ನ ವೀಕ್ಷಕರಿಗೆ ನೀಡಲಿದೆ. ಒಂದು ಸಿನಿಮಾದಿಂದ ವೀಕ್ಷಕರು ಬಯಸುವುದಯ ಪರಿಪೂರ್ಣ ಮನರಂಜನೆ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮೇಕಿಂಗ್‍ನ ಪ್ರತಿಯಂದು ಹಂತವನ್ನು ಒಂದು ಎಂಟರ್ಟೈನಮೆಂಟ್ ಪ್ಯಾಕೇಜ್ ಮೂಲಕ ವೀಕ್ಷಕರಿಗೆ ಕೊಡುವುದಲ್ಲದೇ ಹೊಸ ಸಿನಿಮಾಗಳ ಹೊಸ ವಿಷಯ, ನಟ ನಟಿಯರ ಲೈಫ್ ಸ್ಟೈಲ್, ಹಳೆಯ ಸಿನಿಮಾಗಳ ಮಧುರ ನೆನಪು ಎಲ್ಲವೂ ಕಾರ್ಯಕ್ರಮಗಳಾಗಿ ವೀಕ್ಷಕರನ್ನು ರಂಜಿಸಲಿವೆ. ಎವರ್‍ಗ್ರೀನ್ ಸಾಂಗ್ಸ್, ನಕ್ಕು ನಗಿಸೋ ಕಾಮಿಡಿ ಸೀನ್ಸ್ ಇದರೊಟ್ಟಿಗೆ ಭವಿಷ್ಯದ ಚಿಂತಕರಿಗೆ ಜ್ಯೋತಿಷ್ಯ, ಆರೋಗ್ಯ ವೃದ್ದಿಗಾಗಿ ಹೆಲ್ಥ್ ಪ್ರೋಗ್ರಾಮ್, ಕಣ್ಮನ ತಣಿಸೋ ಟ್ರಾವೆಲ್ ಶೋ ಈ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಿರಿಕನ್ನಡ ವಾಹಿನಿ ವೀಕ್ಷಕರಿಗೆ ನೀಡಲಿದೆ.
.
ಸಿರಿಕನ್ನಡದಲ್ಲಿ ಅತ್ಯುತ್ತಮ ಸಾಂಸಾರಿಕ, ಹಾಸ್ಯ, ಥ್ರಿಲ್ಲರ್, ಭಕ್ತಿಪ್ರಧಾನ, ಪ್ರೇಮಕಥೆಎಲ್ಲಾರೀತಿಯ ಸಿನಿಮಾಗಳ ಸಂಗ್ರಯವಿದ್ದುಎಲ್ಲಾ ವರ್ಗದ ವೀಕ್ಷಕರನ್ನು ರಂಗಿಸಲಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಿನಿಮಾ ಸಂಗ್ರಹವನ್ನು ಹೆಚ್ಚಿಸುತ್ತಾ ಸಾಗುವ ಯೋಜನೆ ನಮ್ಮದಾಗಿದ್ದು ಹೆಚ್ಚು ಹೆಚ್ಚು ಉತ್ತಮ ಚಿತ್ರಗಳನ್ನು ಚಿತ್ರ ಪ್ರೇಮಿಗಳಿಗೆ ಕೋಡೋ ಹೆಬ್ಬಯಕೆ ಸಿರಿಕನ್ನಡದ್ದು. ಕಾರ್ಯಕ್ರಮಗಳಲ್ಲೂ ವಿಭಿನ್ನ ಬಗೆಯ ವಿನೂತನ ಪ್ರೋಗ್ರಾಮ್‍ ರೂಪಿಸೋ ಬಯಕೆ ನಮ್ಮದಾಗಿದ್ದು ಇದಕ್ಕಾಗಿ ಪ್ರತಿಭಾವಂತರ ತಂಡ ಮತ್ತು ಉತ್ಕಷ್ಠ ತಂತ್ರಜ್ಞಾನ ಬರುತ್ತಿರೋ ಸಿರಿಕನ್ನಡ ವಾಹಿನಿ ಉಚಿತವಾಗಿ (ಪ್ರೀಟುಏರ್) ನಿಮಗೆ ಲಭ್ಯವಾಗಿದ್ದು ಸಿರಿಕನ್ನಡ ವಾಹಿನಿ ವೀಕ್ಷಿಸಲು ನಿಮ್ಮ ಕೇಬಲ್ ಆಪರೇಟರ್‍ಗಳನ್ನು ಸಂಪರ್ಕಿಸಬಹುದಾಗಿದೆ.
.
ತಾರೆಯರ ಅಂದ ಚಂದಕ್ಕೆ ಅವರು ತಿನ್ನುವ ಆಹಾರವೂ ಅಷ್ಟೇ ಮುಖ್ಯ.ಆ ಬಗೆಗೆ ತಿಳಿಸಲು ಈ ವಾಹಿನಿಯಲ್ಲಿ ವಿಭ್ನಿನ್ನವಾದ ಅಡುಗೆ ಷೋ ಪ್ರಾರಂಭಿಸುತ್ತಿದ್ದಾರೆ. ಒಟ್ಟಾರೆ ಕರ್ನಾಟಕದ ಮೊದಲ ಸಿನಿಮಾ ಮತ್ತು ಮನರಂಜನಾ ವಾಹಿನಿ ಎಂಬ ಹೆಗ್ಗಳಿಕೆ "ಸಿರಿ ಕನ್ನಡ" ಚಾನಲ್‍ಗೆಇದೆ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡಿಗರ ನಾಡಿಯಾಗಿ ಮೂಡಿಬರಲಿದೆ ಸಿರಿಕನ್ನಡ ವಾಹಿನಿ. ಈ ನಿಮ್ಮಅಭಿಮಾನದ ವಾಹಿನಿಯನ್ನು ಎಲ್ಲರೂ ಹರಸಿ ಹಾರೈಸಬೇಕೆಂಬುದು ಸಿರಿಕನ್ನಡ ತಂಡದ ಆಶಯ.

 
ರಾಜಕುಮಾರದ ನಂತರ ಸಂತೋಷ್‌ ಆನಂದ್‌ರಾಮ್‌ ಮತ್ತು ಪವರ್ ಸ್ಟಾರ್  ಪುನೀತ್‌ರಾಜ್‌ಕುಮಾರ್‌ ಮತ್ತೆ ಒಂದಾಗಿರುವ ಯುವರತ್ನ ಸಿನಿಮಾದ ಮುಹೂರ್ತ ಬೆಂಗಳೂರಿನ ಪಂಚಮುಖ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಬುಧವಾರ ನಡೆದಿದೆ.
yuva rathan.JPG7
.
ಪುನೀತ್‌ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಕ್ಯಾಮೆರ ಬಟನ್‌ ಪ್ರೆಸ್‌ ಮಾಡುವ ಮೂಲಕ ಸಿನಿಮಾಗೆ ಚಾಲನೆ ನೀಡಿದ್ದಾರೆ.  ಕೆಜಿಎಫ್‌, ರಾಜಕುಮಾರ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಈ ಚಿತ್ರಕ್ಕೂ ಹಣ ಹಾಕುತ್ತಿದ್ದಾರೆ.
.
ಕಳೆದ ಬಾರಿ ಫ್ಯಾಮಿಲಿ ಡ್ರಾಮಾ ಹೇಳಿ ಸೂಪರ್‌ ಡ್ಯೂಪರ್‌ ಹಿಟ್‌ ಮಾಡಿದ್ದ ಸಂತೋಷ್‌, ಈ ಬಾರಿ ಅಪ್ಪುಗಾಗಿ ಯಾವ ಥರಹದ ಕಥೆ ಮಾಡಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಸದ್ಯದಲ್ಲೇ ಉಳಿದ ತಾರಾಗಣದ ಮಾಹಿತಿಯನ್ನು ಸಂತೋಷ್‌ ಹಂಚಿಕೊಳ್ಳಲಿದ್ದಾರಂತೆ. 
yuva rathan11111

 

ಹೇರಂಬ ಕಂಬೈನ್ಸ್ ಲಾಂಛನದಲ್ಲಿ ಮಂಜುನಾಥ ಸ್ವಾಮಿ ಅವರು ನಿರ್ಮಿಸಿರುವ `ವಿರಾಜ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

.
ನಾಗೇಶ್ ನಾರದಾಸಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ನಂದಮೂರಿ ಹರಿ ಸಂಕಲನ, ಮಾಸ್ ಮಧು – ರಾಕೆಟ್ ವಿಕ್ರಮ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಅಂತೋನಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕರಾಗಿ ವಿದ್ಯಾಭರಣ್ ಅಭಿನಯಿಸಿದ್ದಾರೆ.

.

ಶಿರಿನ್ ಕಂಚವಾಲ, ನಿಖಿತ, ದೇವರಾಜ್, ವಿನಯಪ್ರಸಾದ್, ಜೈಜಗದೀಶ್, ಸ್ವಾತಿ, ಕಡ್ಡಿಪುಡಿ ಚಂದ್ರು, ಟೆನ್ನಿಸ್ ಕೃಷ್ಣ, ಚಿದಾನಂದ್ ಶ್ರೀಧರ್, ಉಗ್ರಂ ಮಂಜು, ಉಗ್ರಂ ಶರತ್, ರಾಜ್ ದೀಪಕ್ ಶೆಟ್ಟಿ, ಕೃಷಿ ತಪಾಂಡ, ಕುರಿ ಸುನೀಲ್, ಕಾಮಿಡಿ ಕಿಲಾಡಿ ಸೂರ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಗೋಲ್ದನ್ ಸ್ಟಾರ್ ಗಣೇಶ್ ಅಭಿನಯದ `99` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.

.

ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸುತ್ತಿರುವ 39ನೇ ಚಿತ್ರವಿದು. ಈ ಹಿಂದೆ ಗಣೇಶ್ ಅಭಿನಯದ ಸೂಪರ್ ಹಿಟ್ ಚಿತ್ರ `ಮುಂಗಾರು ಮಳೆ`ಯ ಮುಹೂರ್ತ ಕೂಡ ಇದೇ ದೇವಸ್ಠಾನದಲ್ಲಿ ನೆರವೇರಿತ್ತು.

IMG 20181208 WA0014

.

ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಇದೇ ತಿಂಗಳ 20ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

.

ಗಣೇಶ್ ಅವರಿಗೆ ನಾಯಕಿಯಾಗಿ ಜಾಕಿ ಭಾವನ ನಟಿಸುತ್ತಿದ್ದಾರೆ.

ತೋತಾಪುರಿ, ಪ್ರೀಮಿಯರ್‌ ಪದ್ಮಿನಿ ಸಿನಿಮಾಗಳಲ್ಲಿ ಬಿಝಿ ಇರುವ ನಟ ಜಗ್ಗೇಶ್‌ ಈಗ ಕಾಳಿದಾಸನಾಗಲು ಹೊರಟಿದ್ದಾರೆ. ಈ ಸಿನಿಮಾವನ್ನು ಗೀತರಚನೆಕಾರ ಕವಿರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ "ಕಾಳಿದಾಸ ಕನ್ನಡ ಮೇಷ್ಟ್ರು" ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.

.

"ಕಾಳಿದಾಸ ಕನ್ನಡ ಮೇಷ್ಟ್ರು" ಸಿನಿಮಾದಲ್ಲಿ ಜಗ್ಗೇಶ್‌ ಕನ್ನಡ ಶಿಕ್ಷಕರಾಗಿ ನಟಿಸಲಿದ್ದಾರಂತೆ. 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾ ಮಾಡಿದ್ದ ಕವಿರಾಜ್‌ ಎರಡನೇ ಸಿನಿಮಾದಲ್ಲಿ ಕನ್ನಡದ ಕಂಪನ್ನು ಹರಡಿಸಲು ಸಿದ್ಧರಾಗಿದ್ದಾರೆ.

.

ಈ ಚಿತ್ರದಲ್ಲಿ ಜಗ್ಗೇಶ್‌ಗೆ ಜೋಡಿಯಾಗಿ ಮೇಘನಾ ಗಾಂವ್ಕರ್‌ ನಟಿಸುತ್ತಿದ್ದಾರಂತೆ ಇದೇ 10ರಿಂದ ಚಿತ್ರೀಕರಣ ಆರಂಭವಾಗಲಿದೆ.

ಡಾ.ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ನಟನೆಯ ಮಾಸ್ ಎಂಟರ್‌ಟೇನರ್ "ದಿ ವಿಲನ್‌" ಸಿನಿಮಾ ಪೈರಸಿ ಸೇರಿದಂತೆ ಒಂದಷ್ಟು ಅಡೆತಡೆಗಳನ್ನು ಎದುರಿಸಿದರೂ ಇಂದಿಗೆ ಚಿತ್ರವು ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಯಶಸ್ವಿ 50 ದಿನಗಳ ಪ್ರದರ್ಶನ ಕಂಡಿದೆ.

.

ದಸರಾ ಹಬ್ಬಕ್ಕೆ ತೆರೆಕಂಡ ಈ ಚಿತ್ರ ಮೊದಲ ವಾರದಲ್ಲೇ ಸಾರ್ವಕಾಲಿಕ ಗಳಿಕೆ ದಾಖಲೆ ಮಾಡಿದ ಸಿನಿಮಾ ಇದಾಗಿದ್ದು,ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪರ ನಟನೆಯ ಜೊತೆಗೆ ಚಿತ್ರದಲ್ಲಿನ ತಾಯಿ ಸೆಂಟಿಮೆಂಟ್ ಪ್ರೇಕ್ಷಕರಿಗೆ ಹಿಡಿಸಿತ್ತು.

.

ಇನ್ನು ಇಡೀ ಸಿನಿಮಾ ಎಚ್‌ಡಿ ಕ್ವಾಲಿಟಿಯ ಪ್ರಿಂಟ್ ಪೈರಸಿ ವಿಡಿಯೋ ಸಾಕಷ್ಟು ಜನರ ಮೊಬೈಲ್‌ನಲ್ಲಿದೆ ಆದರೂ, ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ,ಪ್ರಸನ್ನ ಸೇರಿದಂತೆ 4 ಚಿತ್ರಮಂದಿರಗಳ ಜೊತೆಗೆ ರಾಜ್ಯಾದ್ಯಂತ ಸುಮಾರು 20 ಚಿತ್ರಮಂದಿರಗಳಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನಗಳನ್ನು ಪೂರೈಸಿದೆ.

.

"ದಿ ವಿಲನ್‌" ಸಿನಿಮಾ 50 ದಿನಗಳನ್ನು ಪೂರೈಸಿದ್ದಕ್ಕೆ ನಟ ಸುದೀಪ್‌ ಅಭಿಮಾನಿಗಳಿಗೆ ಟ್ವೀಟರ್‌ ಮೂಲಕ ಧನ್ಯವಾದ ಹೇಳಿದ್ದಾರೆ.

ಒಟ್ಟಿನಲ್ಲಿ ಈ ವರ್ಷದಲ್ಲಿ "ದಿ ವಿಲನ್‌" ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಸಾಲಿನಲ್ಲಿ ನಿಲ್ಲುತ್ತದೆ.

 

ಕಾಲಿವುಡ್‌ನಲ್ಲಿ ಸಾಕಷ್ಟು ಸುದ್ದಿ ಮಾಡಿದ '96' ಸಿನಿಮಾ ಕನ್ನಡಕ್ಕೆ ರಿಮೇಕ್‌ ಆಗಲಿದ್ದು, ಅದಕ್ಕೆ 99 ಎಂಬ ಟೈಟಲ್‌ ಫೈನಲ್‌ ಆಗಿದೆ.
.
ಕನ್ನಡದ 99 ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿದ್ದು, ವಿಜಯ್‌ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟಿಸುತ್ತಿದ್ದಾರೆ. ಈಗಾಗಲೇ ಮುಂಗಾರುಮಳೆ, ಮಳೆಯಲಿ ಜೊತೆಯಲಿ ಸಿನಿಮಾ ಮೂಲಕ ಭಾವನಾತ್ಮ ಪ್ರೇಮಕಥೆಯನ್ನು ಹೇಳಿರುವ ಪ್ರೀತಂ ಗುಬ್ಬಿ ಮತ್ತು ಗಣೇಶ್‌ ಈ ಬಾರಿ ಮತ್ತೊಂದು ಪ್ರೇಮ ಕಥೆ ಮೂಲಕ ಬರಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ರಾಮು ನಿರ್ಮಾಣ ಮಾಡಲಿದ್ದಾರಂತೆ.
.

ಇನ್ನು 96ನಲ್ಲಿ ನಟಿಸಿದ್ದ ತ್ರಿಷಾ ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡಲಿದ್ದಾರೆ ಎಂಬುದರ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸದ್ಯದಲ್ಲೇ 99 ಸಿನಿಮಾ ಸೆಟ್ಟೇರಲಿದೆ.

ಬಜಾರ್‌ ಸಿನಿಮಾ ನಿರ್ದೇಶನ ಮಾಡುತ್ತಿರುವ ಸಿಂಪಲ್ ಸುನಿ, ಇದಾದ ಮೇಲೆ ಶರಣ್‌ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

.

ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡಿರುವ ಸುನಿ ಅವರು ಕಾಮಿಡಿ ಕಿಂಗ್ ಶರಣ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ ಎಂದರೆ ಸಹಜವಾಗಿಯೇ ಒಳ್ಳೆ ಸಿನಿಮಾವಾಗುತ್ತದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಈ ಸಿನಿಮಾವನ್ನು ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಾಣ ಮಾಡಲಿದ್ದಾರೆ. 
 .

ಬಜಾರ್ ಬಿಡುಗಡೆಯ ನಂತರ ಈ ಚಿತ್ರದ ಕೆಲಸಗಳು ಶುರುವಾಗಲಿದೆ ಮತ್ತು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬರಲಿವೆ ಎನ್ನುತ್ತವೆ ಚಿತ್ರತಂಡದ ಮೂಲಗಳು.

 

ಬಜ಼ಾರ್ ಚಿತ್ರ ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರ ತೆರೆಕಾಣುವ ಸಾಧ್ಯತೆ ಇದೆ. ಟೀಸರ್‌ ಮೂಲಕ ಸದ್ದು ಮಾಡುತ್ತಿರುವ ಬಜಾರ್‌ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹೆಚ್ಚಾಗಿವೆ. 

 

ಶರಣ್ ಅವರು ಸದ್ಯ ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

 
  
ಸಿರಪ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ನಿರ್ಮಾಪಕ ಶ್ರೀ ಫಣಿಭೂಷಣ್ ನಿರ್ಮಿಸುತ್ತಿರುವ ಹಾಸ್ಯ ಪ್ರಧಾನ "ಮುಂದಿನ ಬದಲಾವಣೆ" ಚಿತ್ರವು ಈ ವಾರ 7 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಚಿತ್ರಕ್ಕೆ ಕೋಟಿಶ್ವರ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತ, ರಮೇಶ್‍ಕುಮಾರ್ ಸಂಕಲನವಿದ್ದು, ಚಿತ್ರದಕಥೆ, ಚಿತ್ರಕಥೆ, ಚಿತ್ರಕಥೆ ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಪ್ರವೀಣ್‍ಭೂಷಣ್ ಹೊತ್ತಿದ್ದಾರೆ.
.
  
ತಾರಾಗಣದಲ್ಲಿ ಪ್ರವೀಣ್ ಭೂಷಣ್, ಸಂಗೀತ, ಸತೀಶ್, ಪಂಚಗೌರಿ, ಆರ್ಯನ್, ಮಾಲಾಶ್ರೀ, ಚಕ್ರವರ್ತಿ, ಲಕ್ಷ್ಮಣ್‍ಗೌಡ ಮುಂತಾದವರಿದ್ದಾರೆ
.
#MundinaBadalavane #Cineloka


ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ `ವೀಕೆಂಡ್` ಚಿತ್ರಕ್ಕೆ ಬೆಂಗಳೂರಿನ ವಸಂತಪುರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಖ್ಯಾತ ನಟ ಅನಂತನಾಗ್, ಗೋಪಿನಾಥ್ ಭಟ್ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಬಾಗವಹಿಸಿದ್ದಾರೆ.
.
ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರಕ್ಕೆ ಶಶಿಧರ್ ಅವರ ಛಾಯಾಗ್ರಹಣವಿದೆ. ಮನೋಜ್ ಸಂಗೀತ ನಿರ್ದೇಶನ, ರುದ್ರೇಶ್ ಸಂಕಲನ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ.
.
ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೂರು ಹಾಡುಗಳು, ಒಂದು ಸಾಹಸ ಸನ್ನಿವೇಶ ಹಾಗೂ ಒಂದು ಚೇಸಿಂಗ್ ದೃಶ್ಯವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
.
ಮಿಲಿಂದ್ ಅವರು ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಸಂಜನಾ ಬುರ್ಲಿ. ಹಿರಿಯ ನಟ ಅನಂತನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಕಿಂಗ್ ಸ್ಟಾರ್ ಯಶ್‌ ನಟನೆಯ "ಕೆಜಿಎಫ್‌" ಟ್ರೇಲರ್‌ನಿಂದಾಗಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ.ಚಿತ್ರ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ, ಸಿನಿಮಾದ ಆಡಿಯೋ ಹಕ್ಕು 3.60 ಕೋಟಿಗೆ ಲಹರಿ ಸಂಸ್ಥೆಗೆ ಮಾರಾಟವಾಗಿದೆ.

.

ಹೌದು ಈ ಬಗ್ಗೆ ಸ್ವತಃ ಲಹರಿ ವೇಲು ಅವರೇ ಮಾಧ್ಯಮಗಳಿಗೆ ತಿಳಿಸಿದ್ದು, ಹಿಂದಿ ಭಾಷೆಯನ್ನು ಹೊರತುಪಡಿಸಿ ಕನ್ನಡ,ತೆಲುಗು,ತಮಿಳು, ಮಲಯಾಳಂ ಭಾಷೆಗಳ ಹಕ್ಕನ್ನು ಅವರು ಖರೀದಿಸಿದ್ದಾರೆ. ಈ ಮೊತ್ತಕ್ಕೆ ಕನ್ನಡ ಸಿನಿಮಾವೊಂದರ ಆಡಿಯೋ ಮಾರಾಟವಾಗಿರುವುದು ದಾಖಲೆಯಾಗಿದೆ. ಒಟ್ಟಿನಲ್ಲಿ ಯಶ್‌ ಕೆಜಿಎಫ್‌ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.

.

ಡಿ. 21ಕ್ಕೆ ಬಿಡುಗಡೆಯಾಗುತ್ತಿರುವ ಈ ಸಿನಿಮಾ ದೇಶಾದ್ಯಂತ 5 ಭಾಷೆಗಳಲ್ಲಿ ತೆರೆಕಾಣಲಿದೆ.

 

ಕನ್ನಡದ ಮೇರುನಟ ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಅಭಿಮಾನಿಗಳ ಸೃತಿಪಟಲದಲ್ಲಿ `ಅಂಬಿ ನಿಂಗೆ ವಯಸಾಯ್ತೋ' ಪೂರ್ಣಪ್ರಮಾಣದ ನಾಯಕನಟರಾಗಿ ನಟಿಸಿದ ಕೊನೆಯ ಚಿತ್ರವಾಗಿ ಉಳಿದುಕೊಂಡಿದೆ. ಅನಾರೋಗ್ಯ ಕಾಡುತ್ತಿದ್ದರೂ ಅದರ ಸುಳಿವೂ ಸಿಗದಂತೆ ಅಂಬಿ ಈ ಚಿತ್ರದ ಪಾತ್ರಕ್ಕೆ ಜೀವ ತುಂಬಿದ್ದರು. ಇದೀಗ ಈ ಚಿತ್ರವನ್ನು ವಿದೇಶಗಳಲ್ಲಿ ಮತ್ತೆ ಬಿಡುಗಡೆ ಮಾಡಬೇಕೆಂದು ಅಲ್ಲಿನ ಅಂಬಿ ಅಭಿಮಾನಿಗಳು ಒತ್ತಾಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅದಕ್ಕೆ ಮಣಿದು ಮರು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
.

`ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಮೂಲಕವೇ ವಿದೇಶದಲ್ಲಿರೋ ಕನ್ನಡಿಗರಿಗೆ ಕರ್ಣನನ್ನು ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಡಲು ಜಾಕ್ ಮಂಜು ಮುಂದಾಗಿದ್ದಾರೆ. ಈ ಮೂಲಕವೇ ಅಂಬರೀಶ್ ಅವರು ಬದುಕಿದ ರೀತಿಯನ್ನು ಗೌರವಿಸುವ, ಅವರ ಆದರ್ಶಗಳನ್ನು ಪರಿಪಾಲಿಸುವ ನಿರ್ಧಾರವೊಂದನ್ನೂ ಜಾಕ್ ಮಂಜು ಪ್ರಕಟಿಸಿದ್ದಾರೆ.
.
ವಿದೇಶಗಳಲ್ಲಿ ಅಂಬಿ ನಿಂಗೆ ವಯಸಾಯ್ತೋ ಬಿಡುಗಡೆಯಿಂದ ಬಂದ ಹಣವನ್ನು ಬಡವರ ಕಲ್ಯಾಣಕ್ಕಾಗಿ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಜೀವನದುದ್ದಕ್ಕೂ ಕೊಡುಗೈ ದಾನಕ್ಕೆ ಹೆಸರಾಗಿದ್ದ ಅಂಬರೀಶ್ ಅವರ ಆದರ್ಶಗಳನ್ನು ಪಾಲಿಸುತ್ತಿರುವ ನಿರ್ಮಾಪಕರ ಕಾರ್ಯ ನಿಜಕ್ಕೂ ಶ್ಲಾಘನೀಯ.

 
ಕಲರ್ ಫುಲ್ ಕ್ರಿಸ್ಟಲ್ ಕಂಬೈನ್ಸ್ ಲಾಂಛನದಲ್ಲಿ ಸರ್ವಶ್ರೀ ಅವರು ನರ್ಮಿಸಿರುವ ಒಂದು ಸಣ್ಣ ಬ್ರೇಕ್ ನ ನಂತರ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಳ್ಳಿಯಲ್ಲಿ ನಾಲ್ಕು ಜನ ಸ್ನೇಹಿತರು ಕಟ್ಟೆಯ ಮೇಲೆ ಕುಳಿತಾಗ ನಡೆಯುವ ಘಟನೆಯ ಆಧರಾವಾಗಿ ಇಟ್ಟು ಕೊಂಡು ಲವ್, ಸಸ್ಪೆನ್ಸ್ ಹಾಗೂ ಕಾಮಿಡಿ ಕಥಾನಕವೊಂದ್ದಿರುವ ಈ ಚಿತ್ರವನ್ನು ಅಭಿಲಾಷ್ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
.
ಚಿತ್ರಕ್ಕೆ ಹಿತನ್ ಹಾಸನ್ ಕಥೆ ಮತ್ತು ಸಂಗೀತ, ನಾಗರಾಜ್ ಉಪ್ಪುಂದ ಛಾಯಾಗ್ರಹಣ, ಬೇಬಿನಾಗರಾಜ್ ಸಂಕಲನ, ಜಾಗ್ವಾರ್ ಸಣ್ಣಪ್ಪ ಸಾಹಸ, ಹರ್ಷಪ್ರಿಯ ಸಾಹಿತ್ಯ, ಜಗದೀಶ್.ಟಿ.ಪಿ ಸಂಭಾಷಣೆ ಇದೆ.
ಹಿತನ್ ಹಾಸನ್, ಚೈತ್ರ, ಕಿರಣ್ ಕೂಡ್ಲಿಪೇಟೆ. ಸಿದ್ದರಾಜ್ ಕಲ್ಯಾಣ್‍ಕರ್, ಮೋಹನ್ ಮಂಡ್ಯ, ಮಹಂತೇಶ್, ಕಾವೇರಿ ಶ್ರೀಧರ್,ಮಾಲತೇಶ್, ನಾಗೇಶರಾವ್ ,ಸುಗುಣ,ಮುಂತಾದವರ ತಾರಾಬಳಗವಿದೆ.
ಚಿತ್ರಕ್ಕೆ ರಜಿನಿಕಾಂತ್ ಅವರ ನಿರ್ಮಾಣ ನಿರ್ವಹಣೆಯಿದೆ
#OnduSannaBreakNaNantara #Cineloka

 

ತಮ್ಮ ಸಿನಿಮಾವು ಬಿಡುಗಡೆಗೆ ಸಿದ್ದಗೊಂಡಿದೆ ಎಂಬುದನ್ನು ಹೇಳಿಕೊಳ್ಳಲು, ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಲು ‘ಗಿಣಿ ಹೇಳಿದ ಕಥೆ’ ಚಿತ್ರತಂಡವು ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಚಿತ್ರದ ಮೋಷನ್ ಪಿಕ್ಚರ್, ಟ್ರೈಲರ್ ಮತ್ತು ಎರಡು ಹಾಡುಗಳನ್ನು ತೋರಿಸಿದ ತರುವಾಯ ಎಲ್ಲರೂ ವೇದಿಕೆಗೆ ಆಸೀನರಾದರು. ಮೈಕ್ ತೆಗೆದುಕೊಂಡ ನಾಯಕ, ನಿರ್ಮಾಪಕ ವಿ.ದೇವರಾಜ್ ಮಾತನಾಡುತ್ತಾ, ಚಿತ್ರರಂಗಕ್ಕೆ ಬರುವ ಮುನ್ನ ಪತ್ರಿಕೆಗೆ ಅಂಕಣ ಬರೆಯಲಾಗುತ್ತಿತ್ತು. ರಂಗಭೂಮಿಯಲ್ಲಿ ಬಾಲಕಲಾವಿದನಾಗಿ, ರಸಮಂಜರಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದೆ. ಆ ಸಮಯದಲ್ಲೆ ನಟನಾಗಬೇಕೆಂಬ ಸಣ್ಣದೊಂದು ಆಸೆ ಚಿಗುರಿತು. ಕತೆ ಸಿದ್ದ ಪಡಿಸಿಕೊಂಡು ಹಲವು ನಿರ್ದೇಶಕರು, ನಿರ್ಮಾಪಕರು ಭೇಟಿ ಮಾಡಿದಾಗ ನೋಡುವ ಅಂತ ಅಸಡ್ಡೆ ತೋರಿಸುತ್ತಿದ್ದರು. ಬದುಕಿಗಾಗಿ ರಾತ್ರಿ ಪಾಳಿ ಕೆಲಸ ಮಾಡುತ್ತಾ, ದಿನದ ಹೊತ್ತಿನಲ್ಲಿ ಬೀದಿನಾಟಕದಲ್ಲಿ ಅಭಿನಯಿಸುವ ಅವಕಾಶ ದಕ್ಕಿತು.
.
ಮುಂದೆ ರಂಗ ಗೆಳಯರ ಸಹಕಾರ, ಕೂಡಿಟ್ಟ ಹಣದಿಂದ ಧೈರ್ಯ ಮಾಡಿ ಅರವತ್ತು ಲಕ್ಷದಲ್ಲಿ ಚಿತ್ರ ಮುಗಿಸಲಾಗಿದೆ. ಪ್ರಯಾಣದ ಕತೆಯಲ್ಲಿ ಚಾಲಕನಾಗಿದ್ದು, ಒಮ್ಮೆ ಗ್ರಾಹಕರನ್ನು ಕರೆದುಕೊಂಡು ದಾರಿಯಲ್ಲಿ ತನ್ನ ಪ್ರೀತಿಯ ಕತೆಯನ್ನು ಹೇಳುತ್ತಿರುವಾಗ, ಕಾಕತಾಳೀಯ ಎನ್ನುವಂತೆ ಅವರದು ಅದೇ ರೀತಿ ಇರುತ್ತದೆ. ಕತೆಯಲ್ಲಿ ರಿಯಲ್ ಗಿಣಿಯೊಂದು ಪಾತ್ರ ನಿರ್ವಹಿಸಿದೆ. ಅದು ಏನು ಹೇಳುತ್ತೆ. ಯಾವ ವಿಷಯವನ್ನು ಹೇಳಹೊರಟಿದೆ ಅದರ ಮುಖಾಂತರ ಚಿತ್ರ ತಿರುವು ಪಡೆದುಕೊಳ್ಳುತ್ತದೆ. ಹುಡುಗಿ ಪಾರಿವಾಳ ಲುಕ್ ಇದ್ದರೆ, ಹುಡುಗ ತೆರೆದ ಪುಸ್ತಕದಂತೆ ಇರುತ್ತಾನೆ. ಮನಸಿನ ಭಾವನೆಗಳನ್ನು ಹೇಳುವ ಪ್ರಯತ್ನವನ್ನು ಮಾಡಲಾಗಿದೆ. ಒಮ್ಮೆಯೂ ಅವಳನ್ನು ಮುಟ್ಟದೆ ಪ್ರೀತಿಸುವುದು ವಿಶೇಷ ಎನ್ನಬಹುದು. ಬುದ್ದಿವಾದ, ತತ್ವಗಳನ್ನು ರಂಗಭೂಮಿ ತಂತ್ರದಂತೆ ಹಾಸ್ಯದ ಮೂಲಕ ಹೇಳಲಾಗಿದೆ ಎಂದರು.
.
ಸಂಪ್ರದಾಯಸ್ಥ ಕುಟುಂಬದ ಮಗಳು, ಶಿಕ್ಷಕಿ ಪಾತ್ರದಲ್ಲಿ ನಾಯಕಿಯಾಗಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಅಂತಾರೆ ಗೀತಾಂಜಲಿ. ಹತ್ತೋಂಬತ್ತು ವರ್ಷಗಳ ಕಾಲ ಕಿರುತೆರೆ, ಹಿರಿತೆರೆಗಳಲ್ಲಿ ಕೆಲಸ ಮಾಡಿರುವ ನಾಗರಾಜಉಪ್ಪಂದ ಹೇಳುವಂತೆ ಬೆಂಗಳೂರು, ಬಿಡದಿ, ರಾಮನಗರ, ಚೆನ್ನಪಟ್ಟಣ, ಮಂಡ್ಯಾ, ಮೈಸೂರು, ಪಿರಿಯಾಪಟ್ಟಣ, ಮಡಕೇರಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರಯಾಣ ಎಲ್ಲಿಗೆ ಅಂತ್ಯಗೊಳ್ಳುತ್ತೆ, ಕ್ಲೈಮಾಕ್ಸ್ ಏನಾಗುತ್ತೆ ಎಂಬುದನ್ನು ಸಿನಿಮಾ ನೋಡಿ ಎಂದು ಅಲವತ್ತು ಮಾಡಿಕೊಂಡರು.
.
ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿ, ಎರಡು ಗೀತೆಗೆ ಧ್ವನಿಯಾಗಿರುವ ಹಿತನ್‍ಹಾಸನ್, ಲಹರಿ ಸಂಸ್ಥೆಯ ಆನಂದ್, ಸಾಹಿತಿ ರಾಜಶೇಖರರಾವ್ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು.

Film: Puta 109

Director: Dayal Padmanbhan

Cast: Karthik Jayaram, Naveen Krishna, Vaishnavi Chandra, Sri, Anupama Gowda and others

Music: Ganesh Narayanan

.

Director Dayal Padmanabhan, known for experimental films, has proved his mettle once again with aptly handling the megaphone for his latest film Puta 109. His earlier film Aa Karaala Raatri had invited rave reviews from film critics and appreciation from cine-goers. His latest film is quite interesting and definitely an experimental one.

.

The USP of Puta 109 is the screenplay that has the potential to make the audiences to remain in their seats while watching it at theatres. The director has taken all measures to avoid unnecessary expenditure in making this film by engaging a few artistes and completing the shooting within a few days.

.

It is a murder mystery investigated by an intelligent and shrewd police officer JK (Jayaram Karthik). He begins the investigation with interrogating Sri, a novelist, whose wife Vaishnavi (Vaishnavi Chandra) is murdered. The pre-intermission session is full of imagination. The novelist tries to divert police officer’s attention by bringing a few people such as an A/C mechanic, a publisher, a cook and a relative into the picture but it is the police officer who nabs the real culprit with the help of a missing page in a book.

You have to watch this film to know about the book and how the culprit tried his best to divert police attention and how the police officer  succeeds in finding the culprit and what happens to the culprit.

.

As far as performance is concerned, Jayaram Karthik, known as JK, walks away with his sterling performance as a cop. His dialogue delivery is superb. Naveen Krishna has acted well. His body language deserves appreciation. Vaishnavi Chandra, as an unhappy and unsatisfied wife, has acted well.

.

One cannot ignore the contribution of cinematographer PHK Das who did a commendable job behind the camera. His task was tough since most of the shooting is confined to a room. Ganesh Narayan is also deserves for scoring interesting background music for this crime thriller.

.

Barring few minor flaws, PUTA 109 is a watchable film.

Rating – 3.25/5

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ “ಪೈಲ್ವಾನ್” ಚಿತ್ರದ ಚಿತ್ರೀಕರಣ ಕಳೆದ 2 ವಾರಗಳಿಂದ ಹೈದರಾಬಾದ್ ನಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಎಸ್. ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

.

ಇದೀಗ ಚಿತ್ರತಂಡದಿಂದ ಬಂದಿರೋ ಹೊಸ ಸುದ್ದಿ ಏನೆಂದರೆ, ಚಿತ್ರದ ಬೇರೆ ಭಾಷೆಗಳ ಡಬ್ಬಿಂಗ್ ರೈಟ್ಸ್ ಗೆ ಭರ್ಜರಿ ಬೇಡಿಕೆ ಬರುತ್ತಿದು, ಚಿತ್ರವೂ 7 ಭಾಷೆಗಳಿಗೆ ಬಿಡುಗಡೆಯಾಗಲಿದೆಯಂತೆ.ಚಿತ್ರವೂ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಮರಾಠಿ, ಭೋಜಪುರಿ,ಬಂಗಾಳಿ ಮತ್ತು ಪಂಜಾಬಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆಯಂತೆ.

.

ಈ ವಿಷಯವನ್ನು ಖಚಿತ ಪಡಿಸಿದ ಚಿತ್ರದ ನಿರ್ದೇಶಕ ಕೃಷ್ಣ ಅವರು ಚಿತ್ರಕ್ಕೆ ಬರುತ್ತಿರುವ ಬೇಡಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

" ಹೌದು, ಪೈಲ್ವಾನ್ ಕನ್ನಡ ಹೊರೆತು ಪಡಿಸಿ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಹುತೇಕ ಎಲ್ಲಾ ಭಾಷೆಯ ರೈಟ್ಸ್ ವಿಚಾರವಾಗಿ 2-3 ಸುತ್ತು ಮಾತುಕತೆ ನಡೆದಿದ್ದು, ಇನ್ನೆರಡು ಮೂರು ವಾರಗಳಲ್ಲಿ ಅದರ ಸಂಪೂರ್ಣ ವಿವರವನ್ನು ಅಧಿಕೃತವಾಗಿ ನಾನೇ ನೀಡುತ್ತೇನೆ. ಸದ್ಯಕ್ಕೆ ಮರಾಠಿಯಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರು ಬಿಡುಗಡೆ ಮಾಡುವುದು ಪಕ್ಕಾ ಆಗಿದೆ. ನಾನು ಈ ಚಿತ್ರಕ್ಕೆ  ನಿರ್ಮಾಪಕನೂ ಆಗಿರೋದ್ರಿಂದ ಸಹಜವಾಗಿಯೇ ಡಬಲ್ ಸಂತೋಷವಿದೆ" ಎಂದು ತಿಳಿಸುತ್ತಾರೆ ನಿರ್ದೇಶಕರು.

ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಗೂ ಸಕ್ಕತ್ ಬೇಡಿಕೆ ಇದ್ದು, ದಾಖಲೆಯ ಮೊತ್ತಕ್ಕೆ ಸೇಲಾಗೋದು ಖಚಿತ. ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡುವುದರ ಬಗ್ಗೆ ಇನ್ನಷ್ಟೇ ತೀರ್ಮಾನಿಸಬೇಕಿದೆ ಎನ್ನುತ್ತಾರೆ ಅವರು.

.

ನಾಳೆಯಿಂದ ಚಿತ್ರದ ಬಾಕ್ಸಿಂಗ್ ಫೈಟ್ ದೃಶ್ಯವನ್ನು ಹಾಲೀವುಡ್ ಸ್ಟಂಟ್ ಮಾಸ್ಟರ್ ಲಾರ್ನೆಲ್ ಸ್ಟೋವಲ್ ಅವರ ಸಾರಥ್ಯದಲ್ಲಿ ಚಿತ್ರೀಕರಿಸಲಿದ್ದಾರೆ ಚಿತ್ರತಂಡ.
ಚಿತ್ರಕ್ಕಾಗಿ 20ಕ್ಕೂ ಹೆಚ್ಚು ಸೆಟ್ ಗಳನ್ನು ರಾಮೋಜಿ ಫಿಲಂ ಸಿಟಿಯಲ್ಲಿ ಹಾಕಲಿದೆಯಂತೆ.

.

ಪೈಲ್ವಾನ್ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಅವರು ದೈಹಿಕವಾಗಿ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಚಿತ್ರಕ್ಕಾಗಿ ಲೀನ್ ಬಾಡಿ ಕೂಡ ಮಾಡಿಕೊಂಡಿದ್ದಾರಂತೆ. ಸುದೀಪ್ ಅವರ ಹುಟ್ಟು ಹಬ್ಬಕ್ಕೆ ಬಿಡುಗಡೆಗೊಂಡಿದ್ದ ಟೀಸರ್ ನೋಡಿದ ಸಿನಿಮಾ ಅಭಿಮಾನಿಗಳು ಸುದೀಪ್ ಅವರ ಶ್ರಮವನ್ನು ಮೆಚ್ಚಿಕೊಂಡಿದ್ದರು.

.

 

ಕರುನಾಡ ಚಕ್ರವರ್ತಿ ಡಾ. ಶಿವಣ್ಣ - ರಚಿತ ರಾಮ್ ಅಭಿನಯಿಸಲಿರುವ, ಪಿ ವಾಸು ನಿರ್ದೇಶನದ, ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್.ದ್ವಾರಕೀಶ್ ಹಾಗೂ ಯೋಗಿ ದ್ವಾರಕೀಶ್ ಬಂಗಳೆ ಅವರು ನಿರ್ಮಿಸುತ್ತಿರುವ `ಪ್ರೊಡಕ್ಷನ್ ನಂ 52` ಚಿತ್ರದ ಮುಹೂರ್ತ ಸಮಾರಂಭ ನವೆಂಬರ್ 9 ರ ಶುಕ್ರವಾರ ಹೆಚ್.ಎಸ್.ಆರ್ ಬಡಾವಣೆಯ ಶ್ರೀಬಸವೇಶ್ವರ ಗಾಯತ್ರಿ ದೇವಿ ದೇವಾಲಯದಲ್ಲಿ ನೆರವೇರಿತು.
.

ನಿರ್ಮಾಪಕ(ಮುಂಬೈ) ಹಾಗೂ ಉದ್ಯಮಿ ಕೊಲಂಬಸ್ ಜೇವಿಯರ್ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಉದ್ಯಮಿ ಸತ್ಯಮೂರ್ತಿ ಕ್ಯಾಮೆರಾ ಚಾಲನೆ ಮಾಡಿದರು. ಡಿಸಂಬರ್ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.
.

ಪಿ.ವಾಸು ಅವರ ನಿರ್ದೇಶನದ ಈ ಚಿತ್ರದ ನಾಯಕರಾಗಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಅನಂತನಾಗ್, ರಚಿತರಾಮ್, ಸಾಧುಕೋಕಿಲ, ರಂಗಾಯಣ ರಘು ಮುಂತಾದ ಪ್ರಮುಖರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

 


ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಕಿಂಗ್ ಲಿಂಗರಾಜ್, ಶಬೀನಾ ಹರ, ನಿರ್ಮಿಸಿರುವ ಮನಸಿನ ಮರೆಯಲಿ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಒಂದು ರೊಮ್ಯಾಂಟಿಕ್ ಪ್ರೇಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆಸ್ಕರ್ ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ.

.

ಈ ಚಿತ್ರಕ್ಕೆ ಪವನ್ ಕುಮಾರ್ ಛಾಯಗ್ರಹಣ, ತ್ಯಾಗರಾಜ್ ಸಾಹಿತ್ಯ ಮತ್ತು ಸಂಗೀತ, ಎ.ಆರ್.ಸಾಯಿರಾಮ್ ಚಿತ್ರಕಥೆ ಮತ್ತು ಸಂಭಾಷಣೆ, ಹರೀಶ್ ಗೌಡ ಸಂಕಲನ, ಸ್ಟಾರ್ ನಾಗಿ ನೃತ್ಯ ನಿರ್ದೇಶನ, ವೈಲೆಂಟ್ ವೇಲು ಸಾಹಸವಿದೆ.

.

ಕೀಶೊರ್ ಯಾದವ್, ದಿವ್ಯ ಗೌಡ, ಗುರುರಾಜ್ ಬೂಪಾಲ್, ರಾಜ್, ಪುಷ್ಪ, ಶುಕ್ಲ ಭಗವತ್, ವರ್ದನ್ ತೀರ್ಥಹಳ್ಳಿ, ಮಾಸ್ಟರ್ ಕಿನ್, ಪ್ರಿಯಾಂಕ, ಸಂದೀಪ್ ಮಲಾನಿ, ವಠಾರ ಮಲ್ಲೇಶ್ ಇನ್ನೂ ಮುಂತಾದವರ ತಾರಾಬಳಗವಿದೆ.
್ಮ

 


ಕರ್ನಾಟಕದ ಮನೆ ಮನದ ಮನರಂಜನಾ ವಾಹಿನಿಯಾದ ಉದಯ ಟಿವಿ ತನ್ನಅಭೂತ ಪೂರ್ವ ಕಾರ್ಯಕ್ರಮಗಳಿಂದ ವೀಕ್ಷಕರ ಮನೆ ಮಾತಾಗಿದೆ. ಉದಯ ಟಿವಿ ದೀಪಾವಳಿಯ ಕೊಡುಗೆಯಾಗಿ ಹೊಸ ಧಾರಾವಾಹಿಯೊಂದನ್ನು ಪ್ರಾರಂಭಿಸಲಿದೆ. ಸಸ್ಪೇನ್ಸ್, ಥ್ರಿಲ್ಲರ್ ಹಾರರ್‍ ಮತ್ತು ಪ್ರೇಮಕಥೆಯನ್ನು ಒಳಗೊಂಡ ಹೊಸ ಕಥೆ “ದೇವಯಾನಿ” ಇದೇ ನವೆಂಬರ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

.

ದೇವಯಾನಿ 8 ವರ್ಷದಿಂದ ಶ್ರೀವತ್ಸನನ್ನ ಪ್ರೀತಿಸಿರುತ್ತಾಳೆ. ಅವರ ಪ್ರೀತಿಗೆಎರಡು ಮನೆಯವರಿಂದ ವಿರೋಧವಿದೆ. 8 ವರ್ಷದ ನಂತರ ಅವರ ಮದುವೆಗೆ ಎರಡು ಕುಟುಂಬ ಒಪ್ಪಿಗೆ ಕೊಟ್ಟಿದೆ. ಹೀಗೆ ಮದುವೆ ಮಂಟಪವರೆಗೂ ಬಂದಾಗ ಅಲ್ಲಿಗೆ ಬರುವ ಪವಾಡ ಪುರುಷರೊಬ್ಬರು ಈ ಮದುವೆ ನಡೆದದ್ದೇ ಆದಲ್ಲಿ ದೇವಯಾನಿ ಸಾವಾಗುತ್ತದೆ ಎಂದು ಹೇಳುತ್ತಾರೆ.

.

ಅದಕ್ಕೆ ಪೂರಕವಾಗಿ, ಮದುವೆ ನಿಲ್ಲಿಸಲು ಪ್ರೇಮಿಗಳ ಸುತ್ತ ಹತ್ತಾರು ಶತ್ರುಗಳು ಸೇರುತ್ತಾರೆ.ದೇವಯಾನಿ ಮತ್ತು ಶ್ರೀವತ್ಸರನ್ನು ಕೊಲ್ಲುವ ಕುತಂತ್ರ ಮಾಡುತ್ತಾರೆ. ಈ ಎಲ್ಲಾಅಡ್ಡಿ ಆತಂಕಗಳಿಂದ ಪಾರಾಗುವ ಈ ಜೋಡಿ ಮದುವೆಯಾಗುತ್ತಾರೆ. ಮದುವೆಆದ ನಂತರವೂ ದೇವಯಾನಿ ಕಷ್ಟ ನಿಲ್ಲಲ್ಲ. ಶತಾಯಗತಾಯ ಶ್ರೀವತ್ಸ ದೇವಯಾನಿ ಜೋಡಿಯನ್ನ ಬೇರ್ಪಡಿಸಲೇ ಬೇಕೆನ್ನುವ ಕೆಲ ಹಿತ ಶತ್ರುಗಳು.

.
ಸಾವನ್ನುಗೆದ್ದು ಮತ್ತೆ ನಿನ್ನನ್ನ ಸೇರುವೆಎನ್ನುವದೇವಯಾನಿ ಕಥೆಏನಾಗುತ್ತೆ..?ದೇವಯಾನಿ ಸಾವನ್ನು ಹೇಗೆ ಗೆಲ್ಲುತ್ತಾಳೆ,ಶತ್ರುಗಳಿಂದ ಗಂಡನನ್ನ ಹೇಗೆ ರಕ್ಷಣೆ ಮಾಡ್ತಾಳೆ? ಎನ್ನುವಕುತೂಹಲ ಅಂಶದಿಂದ ಪ್ರತಿಯೊಂದು ಸಂಚಿಕೆಯಲ್ಲೂ ತಿರುವನ್ನು ಹೊಂದಿರುವ ಅಪರೂಪದ ಧಾರಾವಾಹಿ ದೇವಯಾನಿ.

.
ದೇವಯಾನಿ ಧಾರಾವಾಹಿಯನ್ನು ಸುಂದರೇಶ್‍ಅವರು ಓಂ ಸಾಯಿರಾಂಕ್ರಿಯೇಷನ್ಸ್‍ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.ಆಕ್ಷನ್‍ಕಟ್‍ ಜೊತೆಗೆ ಛಾಯಾಗ್ರಹಣ ನಿರ್ವಹಣೆಯನ್ನು ನಿರ್ದೇಶಕ ಜೊತೆಗೆ ಛಾಯಾಗ್ರಾಹಕ ಎಂ.ಕುಮಾರ್ ವಹಿಸಿಕೊಂಡಿದ್ದಾರೆ. ಕಥೆಯನ್ನು ಖ್ಯಾತ ಕಥೆಗಾರರಾದ ಗಿರಿಜಾ ಮಂಜುನಾಥ್‍ ಅವರು ಬರೆಯುತ್ತಿದ್ದು, ಸಂಭಾಷಣೆಯನ್ನು ಗೌತಮ್ ವಖಾರಿ ಬರೆಯುತ್ತಿದ್ದಾರೆ. ಮಾಮೂಲು ಅತ್ತೆ ಸೊಸೆಯ ಕಾಟ ಕಿರುಕುಳ ಕಥೆಯಿಂದ ಹೊರತಾಗಿರುವ ಈ ಹೊಸ ಧಾರಾವಾಹಿ ಪ್ರತಿಯೊಂದು ಕಂತಿನಲ್ಲೂ ಕುತೂಹಲ ತಿರುವುಗಳನ್ನು ನೀಡುತ್ತಾ ಮನರಂಜಿಸುವುದರಲ್ಲಿ ಸಂಶಯವಿಲ್ಲ ಎಂದು ತಂಡದವರು ಹೇಳುತ್ತಾರೆ.

.
“ದೇವಯಾನಿ” ಇದೇ ನವಂಬರ್ 12 ರಿಂದ ಸೋಮವಾರದಿಂದ ಶುಕ್ರವಾರ ಸಂಜೆ 7 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಟ ಸಾರ್ವಭೌಮ ಚಿತ್ರದ ಹಾಡಿನ ಚಿತ್ರೀಕರಣ ಚಿಕ್ಕಮಗಳೂರು, ಹೊರನಾಡು, ಕಳಸ ಸುತ್ತಮುತ್ತ ನಡೆಯುತ್ತಿದೆ.
.
ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಮತ್ತು  ನಟಿ ರಚಿತಾ ರಾಮ್‌ ಈ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಪ್ಪು ಈ ಸಿನಿಮಾದಲ್ಲಿ ಪೋಟೋಗ್ರಫರ್‌ ಪಾತ್ರದಲ್ಲಿ ನಟಿಸಿದ್ದು, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ ಮಾಡುತ್ತಿದ್ದಾರೆ.

.

ಶೂಟಿಂಗ್‌ನಲ್ಲಿ ಬಿಡುವು ಮಾಡಿಕೊಂಡು ಪುನೀತ್‌ ಅವರು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದಿದ್ದಾರೆ.

 

ಶರಣ್‌ ನಟನೆಯ ವಿಕ್ಟರಿ -2 ಈ ವಾರ ಬಿಡುಗಡೆಯಾಗುತ್ತಿದೆ, ಈ ಸಿನಿಮಾದಲ್ಲಿ ಶರಣ್‌ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. "ವಿಕ್ಟರಿ" ಸಿಕ್ವೇಲ್‌ ಇದಾಗಿದೆ. ಆದರೆ ಮೊದಲ ಸಿನಿಮಾಗಿಂತಲೂ ಈ ಸಿನಿಮಾದಲ್ಲಿ ಅತಿ ಹೆಚ್ಚು ಕಾಮಿಡಿ ಇದೆಯಂತೆ.
.
ಕಾಲೇಜ್‌ಕುಮಾರ್‌ ಸಿನಿಮಾ ನಿರ್ದೇಶನ ಮಾಡಿದ್ದ ಹರಿ ಸಂತು ವಿಕ್ಟರಿ -2 ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಸೂಪರ್‌ ಹಿಟ್‌ ಆಗಿದೆ. ಭಟ್ಟರು ಬರೆದಿರುವ "ನಾವು ಮನೆಗ್ ಹೋಗೋದಿಲ್ಲ" ಹಾಡು ಈಗಾಗಲೇ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ.
.
ಮೊದಲ ಭಾಗದಲ್ಲಿದ್ದ ಮಿತ್ರ, ರವಿಶಂಕರ್‌ ಎಲ್ಲರೂ ಎರಡನೇ ಭಾಗದಲ್ಲಿಯೂ ಮುಂದುವರೆದಿದ್ದಾರೆ. ಒಟ್ಟಿನಲ್ಲಿ ವಿಕ್ಟರಿ -2 ನೋಡುವ ಪ್ರತಿಯೊಬ್ಬರನ್ನು, ವಿಕ್ಟರಿ 1ಕ್ಕಿಂತಲೂ ನಕ್ಕು ನಗಿಸುತ್ತದೆ ಎನ್ನುವುದು ಚಿತ್ರತಂಡದ ಮಾತು.

 

ಪುನೀತ್‌ರಾಜ್‌ಕುಮಾರ್‌ ಮತ್ತು ಸಂತೋಷ್‌ ಆನಂದ್‌ರಾಮ್‌ ಕಾಂಬಿನೇಶನ್‌ನ ಹೊಸ ಚಿತ್ರದಲ್ಲಿ ಪೊಲಿಟಿಕಲ್‌ ಡ್ರಾಮಾ ಜಾನರ್ ಕತೆ ಇದೆಯಂತೆ.

"ರಾಜಕುಮಾರ" ಮೂಲಕ 50 ಕೋಟಿ ಕ್ಲಬ್‌ ಓಪನ್‌ ಮಾಡಿದ ಈ ಜೋಡಿಯ ಹೊಸ ಚಿತ್ರದ ಟೈಟಲ್‌ ನವೆಂಬರ್‌ 1ರಂದು ಅನೌನ್ಸ್‌ ಆಗಲಿದೆ. ಪುನೀತ್‌ರಾಜ್‌ಕುಮಾರ್‌ ಅವರ ಅಭಿಮಾನಿಗಳು ಈ ಟೈಟಲ್‌ನ್ನು ಲಾಂಚ್‌ ಮಾಡಲಿದ್ದಾರೆ.

ಹೊಸ ಸಿನಿಮಾದಲ್ಲಿ ಕಥೆ ಏನು ಇರಲಿದೆ ಎಂಬ ಅಭಿಮಾನಿಗಳು ಪ್ರಶ್ನೆ ಕೇಳುತ್ತಲೇ ಇದ್ದಾರೆ. ಚಿತ್ರದಲ್ಲಿ ಫ್ಯಾಮಿಲಿ ಮತ್ತು ಪೊಲಿಟಿಕಲ್‌ ಡ್ರಾಮಾ ಇರಲಿದೆ ಎಂಬ ಸುದ್ದಿ ಹಬ್ಬಿದೆ.

"ರಾಜಕುಮಾರ" ಚಿತ್ರವನ್ನು ನಿರ್ಮಾಣ ಮಾಡಿದ್ದ ವಿಜಯ್‌ ಕಿರಗಂದೂರು ಅವರೇ ಹೊಸ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

 

ತಾಯಿಗೆ ತಕ್ಕ ಮಗ ಸಿನಿಮಾದ ಬಿಡುಗಡೆಯ ಬಿಝಿಯಲ್ಲಿರುವ ನಿರ್ದೇಶಕ ಶಶಾಂಕ್‌ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಿರ್ದೇಶನ ಮಾಡಲಿದ್ದಾರೆ.
.
ಈ ಹಿಂದೆ ಶಶಾಂಕ್‌ ಉಪೇಂದ್ರ ಜತೆ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಉಪ್ಪಿ ಪ್ರಜಾಕೀಯದಲ್ಲಿ ಬಿಝಿಯಾದ ನಂತರ ಶಶಾಂಕ್‌ ಸಿನಿಮಾ ನೆನೆಗುದಿಗೆ ಬಿದ್ದಿತ್ತು. ಆದರೆ ಮೊನ್ನೆ ತಾಯಿಗೆ ತಕ್ಕ ಮಗ ಸುದ್ದಿಗೋಷ್ಠಿಯಲ್ಲಿ ಶಶಾಂಕ್‌ ಮತ್ತು ಉಪೇಂದ್ರ ಇಬ್ಬರು ಒಟ್ಟಿಗೆ ಸಿನಿಮಾ ಮಾಡುವುದಾಗಿ ಅನೌನ್ಸ್‌ ಮಾಡಿದರು.
.
ಶಶಾಂಕ್‌ ಕನ್ನಡದ ಸೂಕ್ಷ್ಮ ಸಂವೇದನೆ ಉಳ್ಳ ನಿರ್ದೇಶಕ ಎಂದು ಹೆಸರು ಮಾಡಿದವರು, ಉಪ್ಪಿ ಡಿಫ್ರೆಂಟ್‌ ಆಗಿ ಸಿನಿಮಾಗಳನ್ನು ಮಾಡಿಕೊಂಡು ಬಂದವರು ಈಗ ಇಬ್ಬರೂ ಒಂದಾಗುತ್ತಿದ್ದಾರೆ. ಇಬ್ಬರ ಸಿನಿಮಾ ಹೇಗಿರುತ್ತದೋ ಕಾದು ನೋಡಬೇಕಿದೆ.

 

ಜೋಶ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ನಟ ರಾಕೇಶ್‌ ಅಡಿಗ ಈಗ ನಿರ್ದೇಶಕರಾಗಿದ್ದು, ನೈಟ್‌ ಔಟ್‌ ಎಂಬ ಸಿನಿಮಾ ಮಾಡುತ್ತಿದ್ದಾರೆ.
.
ಈಗಾಗಲೇ ಸಿನಿಮಾದ ಮೊದಲ ಹಂತ ಪೂರ್ಣಗೊಂಡಿದೆ. ಈ ಸಿನಿಮಾದಲ್ಲಿ ಅಕ್ಷಯ್‌ ಮತ್ತು ಭರತ್‌ ನಟಿಸುತ್ತಿದ್ದಾರೆ.ಇವರ ಜತೆ ‘ಸಂಕಷ್ಟಕರ ಗಣಪತಿ’ ಚಿತ್ರದ ನಾಯಕಿ ಶ್ರುತಿ ಗೊರಾಡಿಯ ನಟಿಸುತ್ತಿದ್ದಾರೆ. ಶ್ರುತಿ ಈ ಸಿನಿಮಾದಲ್ಲಿ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಅಮೆರಿಕ ಮೂಲದ ನವೀನ್‌ ಕೃಷ್ಣ ಎಂಬುವರು ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.
.
ಇಬ್ಬರು ಸ್ನೇಹಿತರ ನಡುವೆ ನಡೆಯುವ ‘ನೈಟ್‌ ಔಚ್‌’ ಜರ್ನಿ ಹೇಗಿರುತ್ತೆ, ಏನೆಲ್ಲ ನಡೆಯುತ್ತದೆ ಅನ್ನುವುದೇ ಸಿನಿಮಾದ ಕಥೆ.

 

ತರುಣ್ ಟಾಕೀಸ್ ಲಾಂಛನದಲ್ಲಿ ಮಾನಸ ತರುಣ್ ಮತ್ತು ತರುಣ್ ಶಿವಪ್ಪ ನಿರ್ಮಿಸಿರುವ `ವಿಕ್ಟರಿ 2` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
.
ಹರಿ ಸಂತೋಷ್ ನಿರ್ದೇಶನದ ಈ ಚಿತ್ರಕ್ಕೆ ತರುಣ್ ಕಿಶೋರ್ ಸುಧೀರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಗುರು ಪ್ರಶಾಂತ್ ರೈ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪ್ರಕಾಶ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಧನು, ಭೂಷಣ್ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ.
.
ಶರಣ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಪೂರ್ವ, ಅಸ್ಮಿತ ಸೂದ್, ರವಿಶಂಕರ್, ಅವಿನಾಶ್, ಸಾಧುಕೋಕಿಲ, ಅರಸು, ನಾಜಿರ್, ತಬಲಾನಾಣಿ, ಸುಂದರ್, ಮಂಜುನಾಥ್ ಹೆಗಡೆ, ಮಿಮಿಕ್ರಿ ದಯಾನಂದ್, ರಾಜಶೇಖರ್, ಕೀರ್ತಿರಾಜ್, ಕುರಿ ಪ್ರತಾಪ್, ಲಹರಿ ವೇಲು, ಮಂಜುನಾಥ್, ಎಂ.ಎನ್.ಲಕ್ಷ್ಮೀದೇವಮ್ಮ ಮುಂತಾದವರಿದ್ದಾರೆ.

Page 2 of 15

kismat

aaadi nigif

ad free

ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ರಾಜಕೀಯದಲ್ಲಿ ಯಾವ ಪಕ್ಷ ಸೇರಬೇಕು.?
  • Votes: (0%)
  • Votes: (0%)
  • Votes: (0%)
  • Votes: (0%)
  • Votes: (0%)
Total Votes:
First Vote:
Last Vote:
Go to top